ಗುರುವಾರ, ಆಗಸ್ಟ್ 22, 2013

ಪದೇ ಪದೇ ಕಾಡುವ ಮಾತಿಗೆ
ಪದೇ ಪದೇ ಕಾಡುವ ನೋಟಕೆ,
ತಿರುಗಿ ತಿರುಗಿ ಕಾಣುವ ಸಣ್ಣ ನೆಪಕ್ಕೆ
ಮತ್ತೆ ನೆನಪಾದಳು ಅವಳು,

ನೆನಪಾದಳವ‌ಳು ಮಲ್ಲೆ ಜಡೆಯ‌
ಕ್ರಷ್ಣ‌ ಸುಂದರಿ, ಬಟ್ಟಲು ಕಂಗಳ ಚೆಲುವೆ
ದಾಳಿಂಬೆಯ ದಂತದ ಮುಗುಳು ನಗೆಯೊಂದಿಗೆ ,
ಸ್ವಾಗತಿಸಿದಳು ಮಡದಿಯಾಗಿ,

ಮಡದಿಯೇ ನನ್ನ ಪ್ರಿಯತಮೆ
ಅವಳಿಗೋಸ್ಕರ ಮಾಡಿಸಿದೆ ಒಂದು
ಜೀವವಿಮೆ.


 ಶೇಖರ್ S.S.L.C

ಶನಿವಾರ, ಜುಲೈ 27, 2013

ಆ ಕಲ್ಪನಾತೀತ ಸ್ಪರ್ಷಕ್ಕೆ
ನಾ ಏನ ಹೇಳಲಿ?
ಬಾನುಲಿಯ ನಿನಾದದ೦ತೆ
ತೇಲಿ ಬ೦ದು
ನನ್ನೆದೆಯ ಬಾ೦ದಳದಿ
ಸುರುಳಿ ಸುತ್ತಿದ ಹಾಗೆ
ಮೆಲ್ಲುಲಿಯ ತುಟಿಯ
ಆಕಾಶವಾಣಿಯ,

ಮುತ್ತಿಟ್ಟು ನಿಲ್ಲಿಸಿದ ಹಾಗೆ
ನಾವು ಹುಡುಗರೇ ಹೀಗೆ
ಉತ್ತರಗಳೇ ಇಲ್ಲದ
ಪ್ರಶ್ನೆಪತ್ರಿಕೆಯ ಹಾಗೆ......

ತಟಸ್ಥ ನಿಲುವುಗಳಿಲ್ಲ
ಸ್ತಬ್ಧ ಎದೆಬಡಿತಗಳಿಲ್ಲ
ಹಳೆಯ ಗೆಳತಿಗೂ ಹಾಗೆ
ಹೊಸ ನಲುಮೆಗೂ ಹೀಗೆ
ಕನಸು ಕೊಟ್ಟ ಕನ್ನೆಯ ಹಾಗೆ
ನಾವು ಹುಡುಗರೇ ಹೀಗೆ
ಅ೦ಕಿಗಳೇ ಇಲ್ಲದ
ಮಗ್ಗಿಯ ಹಾಗೆ...........

ಶೇಖರ್.sslc